ಮಕ್ಕಳಿಗೆ ಕತೆಗಳೆಂದರೆ ಬಹಳ ಇಷ್ಟ. ಎಂತಹಾ ಕಥೆಗಳನ್ನಾದರೂ ಅವರು ಆಸಕ್ತಿಯಿಂದ ಓದುತ್ತಾರೆ. ಮಕ್ಕಳ ಬುದ್ಧಿಯ ಬೆಳವಣಿಗೆ ಮತ್ತು ಅವರಲ್ಲಿ ಉತ್ತಮ ಗುಣನಡತೆಗಳನ್ನು ಉಂಟು ಮಾಡುವಲ್ಲಿ ಕಥೆಗಳ ಪಾತ್ರ ಬಹಳ ಮಹತ್ತರವಾದುದು. ಚಿಕ್ಕಂದಿನಲ್ಲಿ ಕೇಳಿದ ಕಥೆಗಳನ್ನು ಅವರು ಜೀವಮಾನವಿಡೀ ನೆನಪಿಡುತ್ತಾರೆ. ಅದರ ಪ್ರಭಾವವು ಜೀವನದಾದ್ಯಂತ ಅವರಲ್ಲಿ ಗೋಚರಿಸುತ್ತದೆ.
ಧಾರ್ಮಿಕ ಶ್ರದ್ಧೆ ಮತ್ತು ನೀತಿಕತೆಗಳ ಮೂಲಕ ಮಕ್ಕಳ ಮನ-ಮಸ್ತಿಷ್ಕವನ್ನು ರೂಪಿಸಿದರೆ ಅವರ ಬೆಳವಣಿಗೆಯು ಸರಿಯಾದ ದಿಕ್ಕಿನಲ್ಲಿ ಸಾಗುವುದು. ಈ ನಿಟ್ಟಿನಲ್ಲಿ ಶಾಂತಿ ಪ್ರಕಾಶನವು ಹಲವು ನೈತಿಕ ಕಥೆ ಪುಸ್ತಕಗಳನ್ನು ಪ್ರಕಟಿಸಿದೆ. ಇದು ಮಕ್ಕಳಿಗೆ ಮಾತ್ರವಲ್ಲ, ಕತೆ ಓದುವ ಹವ್ಯಾಸವಿರುವ ಎಲ್ಲ ಪ್ರಾಯದವರಿಗೂ ಉಪಯುಕ್ತವಾಗಬಲ್ಲುದು.
Ratings & Reviews
Login account to write review
Login0.00
Average Rating- (0.00)
