ಪ್ರವಾದಿ ಮುಹಮ್ಮದ್(ಸ) ಅವರ ಕುರಿತು ಬರೆಯಲಾದಷ್ಟು ಈ ಲೋಕದಲ್ಲಿ ಬೇರಾವ ವ್ಯಕ್ತಿಯ ಕುರಿತೂ ಬರೆಯಲಾಗಿಲ್ಲ. ಒಂದು ಪುಟದಿಂದ ಹಿಡಿದು ಸಾವಿರ ಸಾವಿರ ಪುಟಗಳನ್ನು ಮೀರಿದ ಅವರ ಜೀವನ ಚರಿತ್ರೆ, ಅವರ ಬದುಕಿನ ವಿವಿಧ ಮಗ್ಗುಲುಗಳು, ವಿವಿಧ ಘಟನೆಗಳನ್ನೊಳಗೊಂಡ ಕಿರು ಹೊತ್ತಿಗೆ, ಬೃಹತ್ ಗ್ರಂಥಗಳು ಲೋಕದ ನಾನಾ ಭಾಗಗಳಲ್ಲಿ ನಾನಾ ಭಾಷೆಗಳಲ್ಲಿ ಧಾರಾಳ ಲಭ್ಯವಿದೆ. ಆದರೂ ಇನ್ನೂ ಅವರ ಕುರಿತು ಬರೆದು ಮುಗಿದಿಲ್ಲ. ಹೊಸ ಹೊಸ ರೀತಿ, ಹೊಸ ಹೊಸ ಶೈಲಿ, ಹೊಸ ಹೊಸ ದೃಷ್ಟಿಕೋನಗಳಿಂದ ಬೇರೆ ಬೇರೆ ಸಾಹಿತಿಗಳು, ಬರೆಹಗಾರರು, ಗ್ರಂಥಕರ್ತರು ಹಾಗೂ ಕವಿಗಳು ಅವರ ಕುರಿತು ಎಷ್ಟೇ ಬರೆದರೂ ಅವರ ಜೀವನ ವೃತ್ತಾಂತ ಮುಗಿಯಿತೆಂದಿಲ್ಲ.
ʻಅನಾಥ ಮುತ್ತು: ಪ್ರವಾದಿ ಮುಹಮ್ಮದ್(ಸ)’ ಎಂಬ ಈ ಗ್ರಂಥವು ಪ್ರವಾದಿ ಮುಹಮ್ಮದ್(ಸ) ಅವರ ಜೀವನದ ಕುರಿತು ಒಂದು ವಿಶಿಷ್ಟವಾದ ಶೈಲಿಯಲ್ಲಿ ಕಾದಂಬರಿಯ ರೂಪದಲ್ಲಿ ಬರೆಯಲ್ಪಟ್ಟ ಕೃತಿಯಾಗಿದೆ. ಈ ಕಾದಂಬರಿಯನ್ನು ಓದುತ್ತಾ ಹೋದಂತೆ ಇದರಲ್ಲಿ ಬರುವ ಸನ್ನಿವೇಶಗಳು, ಏರು ತಗ್ಗುಗಳು, ಭಾವವಿಕಾರ ಇತ್ಯಾದಿಗಳು ಓದುಗನ ಮನಸ್ಸನ್ನು ಮಂತ್ರ ಮುಗ್ಧಗೊಳಿಸದೆ ಇರುವುದಿಲ್ಲ. ಭಾವನಾತ್ಮಕ ಸನ್ನಿವೇಶಗಳು ಕೆಲವೊಮ್ಮೆ ಓದುಗನ ಕಣ್ಣು ತೇವಗೊಳಿಸುತ್ತದೆ. ಮೂಲ ಲೇಖಕರೇ ಈ ಗ್ರಂಥವನ್ನು ಬರೆಯುವಾಗ ಮತ್ತು ಅದನ್ನು ಓದುವಾಗ ಹಲವೊಮ್ಮೆ ಅತ್ತದ್ದಿದೆಯೆಂದು ಹೇಳಿರುವುದು ಪುಸ್ತಕದ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ.
Ratings & Reviews
Login account to write review
Login0.00
Average Rating- (0.00)
