ಮನುಷ್ಯನಿಗೆ ಸ್ವಂತ ಮನೆಯು ನೀಡುವ ಸಂತೃಪ್ತಿ ಮತ್ತು ಸುಖವನ್ನು ಜಗತ್ತಿನ ಯಾವುದೇ ಸುಖದ ಸುಪ್ಪತ್ತಿಗೆಯ ವಾಸಕೇಂದ್ರಕ್ಕೂ ನೀಡಲಿಕ್ಕೆ ಸಾಧ್ಯವಿಲ್ಲ. ಈ ಸುಖ ಸಂತೃಪ್ತಿಗೆ ಮನೆಯಲ್ಲಿ ವಾಸಿಸುವವರ ಉನ್ನತ ಸ್ವಭಾವ ಮತ್ತು ಗುಣವಿಶೇಷತೆಗಳೇ ಇದಕ್ಕೆ ಕಾರಣವಾಗಿರುತ್ತವೆ. ಎಷ್ಟು ಸಣ್ಣ ಮನೆಯನ್ನಾದರೂ ಸ್ವರ್ಗವಾಗಿಸಲು ಅವರಿಗೆ ಸಾಧ್ಯವಿರುತ್ತದೆ; ಅಂತೆಯೇ ಎಷ್ಟು ದೊಡ್ಡ ಬಂಗಲೆಯಾದರೂ ನರಕ ಸದೃಶವಾಗಿಸಲು ಅಲ್ಲಿ ವಾಸಿಸುವವರಿಗೆ ಸಾಧ್ಯವಾಗುತ್ತದೆ. ಆದುದರಿಂದ ಮನೆಯನ್ನು ಸದಾ ಸುಗಂಧ ಬೀರುವ ರೀತಿಯಲ್ಲಿ ಮಾರ್ಪಡಿಸುವುದು ಹೇಗೆ, ಅಲ್ಲಿಂದ ಕರಿಹೊಗೆಯು ಹೊರಬಾರದಂತೆ ನೋಡಿಕೊಳ್ಳುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಈ ಕೃತಿಯಲ್ಲಿ ಸಮಗ್ರವಾಗಿ ವಿವರಿಸಲಾಗಿದೆ.
ಕೌಟುಂಬಿಕ ಭದ್ರತೆಗೆ, ಸಾಂಸಾರಿಕ ತೃಪ್ತಿಗೆ, ಕೌಟುಂಬಿಕ ಜೀವನದಲ್ಲಿ ಹೊಸ ಸ್ಪೂರ್ತಿ ಮತ್ತು ಚೈತನ್ಯವನ್ನು ತುಂಬಲು ಬಯಸುವ ಪ್ರತಿಯೊಬ್ಬರಿಗೂ ಬಹಳ ಉಪಯುಕ್ತವಾದ ಕೃತಿ.
Ratings & Reviews
Login account to write review
Login0.00
Average Rating- (0.00)
