"ಮಾನವಕುಲದ ವಿಮೋಚಕ" ಎಂಬ ಈ ಗ್ರಂಥದಲ್ಲಿ ಮೌಲಾನಾ ನಈಮ್ ಸಿದ್ದೀಕಿಯವರು ಪ್ರವಾದಿ ಮುಹಮ್ಮದರ(ಸ) ಇತಿಹಾಸ ಮತ್ತು ಅವರು ಹೂಡಿದ ಇಸ್ಲಾಮೀ ಆಂದೋಲನದ ಚರಿತ್ರೆಯನ್ನು ಪ್ರಭಾವಪೂರ್ಣ ಮತ್ತು ಮನಮುಟ್ಟುವ ಶೈಲಿಯಲ್ಲಿ ವಿವರಿಸಿದ್ದಾರೆ.
"ಮುಹ್ಸಿನೆ ಇನ್ಸಾನಿಯತ್" ಎಂಬ ಮೂಲ ಉರ್ದು ಗ್ರಂಥವು ಇಂದು ಪ್ರಚಲಿತವಿರುವ ಪ್ರವಾದಿ ಚರಿತ್ರೆಯ ಗ್ರಂಥಗಳಲ್ಲಿಯೇ ಅತಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ. ಭಾರತೀಯ ಉಪಭೂಖಂಡದಲ್ಲಿ ಅದರಂತಹ ಜನಪ್ರಿಯವಾದ ಪ್ರವಾದಿ ಚರಿತ್ರೆಯ ಗ್ರಂಥಗಳು ವಿರಳ.
‘Muhammad the Benefactor of Humanity’ ಎಂಬ ಹೆಸರಲ್ಲಿ ಅದರ ಒಂದು ಆಂಗ್ಲ ಅವತರಣಿಕೆಯೂ ಪ್ರಕಟಗೊಂಡು ಜನಪ್ರಿಯವಾಗಿದೆ. ಈ ಕೃತಿಯು ಕನ್ನಡ ನಾಡುನುಡಿಗೆ ಶಾಂತಿ ಪ್ರಕಾಶನದ ಇನ್ನೊಂದು ಅತ್ಯಮೂಲ್ಯ ಕೊಡುಗೆಯಾಗಿದೆ.
Ratings & Reviews
Login account to write review
Login0.00
Average Rating- (0.00)
