0 items
Show in Cart Page
img

No items found

View Products
Discount 0
Total ₹0.00
Checkout
img
img

ತಫ್ಹೀಮುಲ್ ಕುರ್‌ಆನ್ ಭಾಗ - 6

  • (0)

ವಿಶ್ವವಿಖ್ಯಾತ ಕುರ್‌ಆನ್‌ ವ್ಯಾಖ್ಯಾನ ತಫ್‌ಹೀಮುಲ್‌ ಕುರ್‌ಆನ್‌ನ ಕನ್ನಡಾನುವಾದವಿದು. ಆರು ಸಂಪುಟಗಳ ಪೈಕಿ ಭಾಗ 6ರಲ್ಲಿ ಸೂರಃ ಅತ್ತಹ್‌ರೀಮ್‌ನಿಂದ ಸೂರಃ ಅನ್ನಾಸ್‌ ತನಕದ 49 ಅಧ್ಯಾಯಗಳನ್ನು ಒಳಗೊಂಡಿದೆ

SKU:

₹400.00 ₹360.00

Quantity

ಪವಿತ್ರ ಕುರ್‌ಆನಿನ ವಿಶ್ವವಿಖ್ಯಾತ ವ್ಯಾಖ್ಯಾನ ಗ್ರಂಥವಾಗಿದೆ ತಫ್‌ಹೀಮುಲ್‌ ಕುರ್‌ಆನ್.‌ ಆರು ಸಂಪುಟಗಳಿರುವ ಈ ಗ್ರಂಥವು ಅನೇಕ ಜಾಗತಿಕ ಭಾಷೆಗಳಲ್ಲೂ ಹಲವಾರು ಭಾರತೀಯ ಭಾಷೆಗಳಲ್ಲೂ ಅನುವಾದಿಸಲ್ಪಟ್ಟಿದೆ. ಭೌತಿಕ ವಾದ, ನಾಸ್ತಿಕತೆ, ಧರ್ಮ ನಿರಪೇಕ್ಷತೆ, ಬಂಡವಾಳ ಶಾಹಿತ್ವ ಮತ್ತು ಕಮ್ಯುನಿಝಮ್‌ ಮುಂತಾದ ಆಧುನಿಕ ವಿಚಾರಧಾರೆಗಳ ಕಡೆಗೆ ಸಾಗುತ್ತಿದ್ದ ಯುವಜನಾಂಗದ ಮನಸ್ಸಿನಲ್ಲಿ ಧರ್ಮದ ಬಗ್ಗೆ ಸರಿಯಾದ ತಿಳುವಳಿಕೆ, ಅಭಿಮಾನ ಮೂಡಿಸುವಲ್ಲಿ ಈ ಗ್ರಂಥವು ಮಹತ್ತರ ಪಾತ್ರ ವಹಿಸಿದೆ. ಆಧುನಿಕ ಮನ ಮಸ್ತಿಷ್ಕಗಳನ್ನು ಪೂರ್ಣವಾಗಿ ಸಂತೃಪ್ತಗೊಳಿಸುವ ರೀತಿಯಲ್ಲಿ, ಅತ್ಯಾಕರ್ಷಕ ಶೈಲಿಯಲ್ಲಿ ಈ ಗ್ರಂಥದಲ್ಲಿ ಕುರ್‌ಆನನ್ನು ವ್ಯಾಖ್ಯಾನಿಸಲಾಗಿದೆ. ತಫ್‌ಹೀಮುಲ್‌ ಕುರ್‌ಆನ್‌ ಕೇವಲ ಕುರ್‌ಆನಿನ ಅನುವಾದವಲ್ಲ, ಅದರ ಹೆಸರೇ ಸೂಚಿಸುವಂತೆ ಇದು ಕುರ್‌ಆನನ್ನು ಚೆನ್ನಾಗಿ ಗ್ರಹಿಸಲು ಸುಲಭವಾಗುವ ರೀತಿಯಲ್ಲಿ ಮಾಡಲಾದ ಭಾವಾನುವಾದ ಮತ್ತು ವ್ಯಾಖ್ಯಾನವಾಗಿದೆ. ಈ ಗ್ರಂಥದ ಅಧ್ಯಯನ ನಡೆಸುವ ಪ್ರತಿಯೊಬ್ಬನೂ ಪವಿತ್ರ ಕುರ್‌ಆನ್‌ ತನ್ನಿಂದ ಏನು ಬಯಸುತ್ತದೆ, ತಾನು ಯಾರು, ಈ ಲೋಕದಲ್ಲಿ ತನ್ನ ಪಾತ್ರವೇನು ಎಂಬುದನ್ನೆಲ್ಲ ಕನ್ನಡಿಯಲ್ಲಿ ನೋಡಿದಂತೆ ಚೆನ್ನಾಗಿ ಗ್ರಹಿಸಬಲ್ಲನು.

ಈ ಗ್ರಂಥದ ವಿಶೇಷತೆಗಳು :
1. ಐತಿಹಾಸಿಕ ಘಟನೆಗಳು ಮತ್ತು ಸನ್ನಿವೇಶಗಳು ಬರುವ ಕಡೆ ಅದಕ್ಕೆ ಸಂಬಂಧಿಸಿದ ಭೂಪಟವನ್ನು ಅಳವಡಿಸಲಾಗಿದೆ.
2. ಇದರ ಮುನ್ನುಡಿಯು ಕುರ್‌ಆನ್‌ನ ಅಧ್ಯಯನಕ್ಕೆ ಇರುವ ಮಾರ್ಗದರ್ಶಿಯಾಗಿದೆ.
3. ಗ್ರಂಥದ ಕೊನೆಯಲ್ಲಿ ವಿಷಯ ಸೂಚಿ (Index)‌ಕೊಡಲಾಗಿದ್ದು, ಓದುಗನಿಗೆ ಯಾವುದೇ ವಿಷಯವನ್ನು ಹುಡುಕಿ ತೆಗೆಯಲು, ಪ್ರತಿಯೊಂದು ವಿಷಯದ ಬಗ್ಗೆ ವಿವರಣೆ ಸಂಗ್ರಹಿಸಲು ಅತ್ಯಂತ ಅನುಕೂಲವಾಗಿದೆ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book

We may use cookies or any other tracking technologies when you visit our website, including any other media form, mobile website, or mobile application related or connected to help customize the Site and improve your experience. learn more

Allow