ಇಂದು ಇಸ್ಲಾಮ್ ಜನಮನಗಳನ್ನು ಆಕರ್ಷಿಸುತ್ತಾ ಇರುವುದನ್ನು ಜಾಗರತಿಕ ವಿದ್ಯಮಾನಗಳು ಎತ್ತಿ ತೋರಿಸುತ್ತಿದೆ. ಲೋಕದ ನಾನಾ ಭಾಗಗಳಲ್ಲಿ ಜನರು ಇಸ್ಲಾಮಿನತ್ತ ಹರಿದು ಬರುತ್ತಿದ್ದಾರೆ. ಇಸ್ಲಾಮ್ ಒಂದು ವಿಮೋಚಕ ಸಿದ್ಧಾಂತವಾಗಿ ಸರ್ವರೋಗಗಳಿಗೆ ಸಿದ್ಧೌಷಧವಾಗಿ ಮುನ್ನುಗ್ಗುತ್ತಾ ಬರುತ್ತಿದೆ. ವಿಶೇಷವಾಗಿ ಮಹಿಳೆಯರನ್ನು ಅದು ಹೆಚ್ಚು ಆಕರ್ಷಿಸುತ್ತಾ ಇದೆ. ಅವರಿಗೆ ಇಸ್ಲಾಮಿನಲ್ಲಿ ಮಾತ್ರ ಸಮಾನತೆ, ಸ್ವಾತಂತ್ರ್ಯ ಲಭ್ಯವೆಂದು ಮನವರಿಕೆಯಾಗುತ್ತದೆ. ಒಟ್ಟಿನಲ್ಲಿ ಲೋಕದ ಭವಿಷ್ಯವು ಇಸ್ಲಾಮಿನಿಂದಲೇ ಉಜ್ವಲವಾಗಲಿದೆ. ಇಸ್ಲಾಮಿಗೆ ಉಜ್ವಲ ಭವಿಷ್ಯವಿದೆ. ಆದರೆ ಅದಕ್ಕೆ ಮುಸ್ಲಿಮರ ಬದುಕು ಇಸ್ಲಾಮಿನಂತೆ ನಿಷ್ಕಳಂಕವಾಗಿರಬೇಕಾಗಿದೆ. ಅವರು ಇಸ್ಲಾಮಿನ ಮಾದರಿಯಾಗಿ ಜೀವಿಸಬೇಕು. ಅದಕ್ಕಾಗಿ ಸರ್ವತ್ಯಾಗಕ್ಕೂ ಸಿದ್ಧರಾಗಬೇಕು. ಮಿಥ್ಯ ಸಿದ್ಧಾಂತಗಳಿಂದ ಭೀತಿಗೊಳಗಾಗಬಾರದು. ಪರಿಸ್ಥಿತಿಯ ಒತ್ತಡದಿಂದ ನಿರಾಶರಾಗಬಾರದು ಎಂದು ಖ್ಯಾತ ಇಸ್ಲಾಮೀ ವಿದ್ವಾಂಸ ಮತ್ತು ಬರೆಹಗಾರ ಪ್ರೊ ಖುರ್ಷಿದ್ ಅಹ್ಮದ್ರವರು ಇತಿಹಾಸದ ಘಟನೆಗಳ ಆಧಾರದಲ್ಲಿ ‘ಉಜ್ವಲ ಭವಿಷ್ಯ’ ಎಂಬ ಈ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ. ಅವರ ಅಧ್ಯಯನದಿಂದ ಇಸ್ಲಾಮೀ ಆಂದೋಲನದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮತ್ತು ಸ್ಫೂರ್ತಿ ಬೆಳಗುವಂತಾಗಲಿ ಮತ್ತು ಒಟ್ಟು ಮುಸ್ಲಿಮರಲ್ಲಿ ಇಸ್ಲಾಮಿನಂತೆ ಜೀವಿಸುವ ಮತ್ತು ಅದಕ್ಕಾಗಿ ತ್ಯಾಗ ಬಲಿದಾನ ಮಾಡುವ ಹುಮ್ಮಸ್ಸು ಬೆಳೆಯಲು ಈ ಕೃತಿಯು ಸಹಕಾರಿಯಾಗಿದೆ.
Ratings & Reviews
Login account to write review
Login0.00
Average Rating- (0.00)
