ಇಸ್ಲಾಮಿನ ಮೂಲಭೂತ ಶಿಕ್ಷಣವನ್ನು ಕಲಿಯಬೇಕಾದುದು ಪ್ರತಿಯೊಬ್ಬ ಮುಸ್ಲಿಮ್ ಸ್ತ್ರೀ-ಪುರುಷರ ಕರ್ತವ್ಯವಾಗಿದೆ. ಅದಕ್ಕಾಗಿ ಮುಸ್ಲಿಮ್ ಬಾಲಕ-ಬಾಲಕಿಯರ ಧಾರ್ಮಿಕ ವಿದ್ಯಾಭ್ಯಾಸಕ್ಕಾಗಿ ವಿಶೇಷ ಗಮನ ಹರಿಸಲಾಗುತ್ತದೆ. ದೇಶದಾದ್ಯಂತ ಹಳ್ಳಿ, ಪಟ್ಟಣಗಳಲ್ಲಿ ನಡೆಯುವ ಮದ್ರಸಗಳು ಈ ಉದ್ದೇಶವನ್ನು ಈಡೇರಿಸುವಲ್ಲಿ ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿವೆ. ಆದರೆ ಮದ್ರಸಗಳಲ್ಲಿ ವಿದ್ಯಾಭ್ಯಾಸ ಗಳಿಸಲು ಸಾಧ್ಯವಾಗದ ಅನೇಕ ಸ್ತ್ರೀ-ಪುರುಷರು ಸಮಾಜದಲ್ಲಿ ಹರಡಿಕೊಂಡಿದ್ದಾರೆ. ಈ ಕೊರತೆಯನ್ನು ನೀಗಿಸುವ ಸಲುವಾಗಿ ಈ ಪುಸ್ತಕವನ್ನು ಬರೆಯಲಾಗಿದೆ. ಇಸ್ಲಾಮಿನ ಮೂಲಭೂತ ವಿಶ್ವಾಸಗಳು, ಆರಾಧನಾ ಕರ್ಮಗಳು ಹಾಗೂ ಇನ್ನಿತರ ವಿಷಯಗಳನ್ನು ಸುಲಭದಲ್ಲಿ ಗ್ರಹಿಸಲು ಈ ಕೃತಿ ಸಹಾಯಕವಾಗಿದೆ.
Ratings & Reviews
Login account to write review
Login0.00
Average Rating- (0.00)
