ಅಲ್ಲಾಮಾ ಹಾಫಿಝ್ ಇಬ್ನು ಕಯ್ಯಿಮ್(ರ) ಇಸ್ಲಾಮೀ ಜಗತ್ತಿನ ಪ್ರಖಾತ ವಿದ್ವಾಂಸರಲ್ಲೊಬ್ಬರಾಗಿದ್ದರು. ಅವರ 'ಅಲ್ ವಾಬಿಲುಸ್ಸಯ್ಯಿಬ್ ಮಿನ್ ಇಲ್ಮಿತ್ತಯ್ಯಿಬ್' ಎಂಬ ಅರಬೀ ಗ್ರಂಥದ ಕೊನೆಯ ಭಾಗದ ಕನ್ನಡಾನುವಾದವೇ 'ದೈನಂದಿನ ಪ್ರಾರ್ಥನೆಗಳು' ಎಂಬ ಈ ಕೃತಿ. ಇದರಲ್ಲಿ ಪ್ರವಾದಿ ಮುಹಮ್ಮದರು(ಸ) ಸಮುದಾಯಕ್ಕೆ ಕಲಿಸಿದ ದೈನಂದಿನ ದಿಕ್ರ್, ತಸ್ಬೀಹ್ ಮತ್ತು ದುಆಗಳನ್ನು ಅನುಕ್ರಮವಾಗಿ ಕ್ರೋಡೀಕರಿಸಲಾಗಿದೆ. ಹೆಚ್ಚಿನೆಲ್ಲ ಉಲ್ಲೇಖಗಳಲ್ಲೂ ಅದು ವರದಿಯಾದ ಹದೀಸ್ ಗ್ರಂಥದ ಹೆಸರನ್ನು ಸೂಚಿಸಲಾಗಿದೆ. ಈ ಗ್ರಂಥವು ಅಧಿಕೃತವೂ ಉನ್ನತ ಗುಣಮಟ್ಟದ್ದೂ ಆಗಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಕರ್ಮಶಾಸ್ತ್ರೀಯ ಚರ್ಚೆಯಿಂದ ಇದು ಮುಕ್ತವಾಗಿದೆ.
Ratings & Reviews
Login account to write review
Login0.00
Average Rating- (0.00)
