ಮಾನವನ ಹೃದಯವು ಒಳಿತು-ಕೆಡುಕುಗಳ ತಾಣವಾಗಿದೆ. ಅದು ಒಳಿತಿನತ್ತ ಮಾನವನನ್ನು ಒಯ್ಯಬೇಕಾದರೆ ಅದನ್ನು ಸದಾ ಸಂಸ್ಕರಿಸುವುದು ಅಗತ್ಯವಾಗಿದೆ. ಪ್ರವಾದಿ ಮುಹಮ್ಮದ್(ಸ) ಹೇಳಿರುವರು, ಮಾನವ ಶರೀರದಲ್ಲಿ ಒಂದು ಮಾಂಸದ ಮುದ್ದೆಯಿದೆ. ಅದು ಸರಿಯಾಗಿದ್ದರೆ ಇಡೀ ಶರೀರವು ಶುದ್ಧವಾಗಿರುತ್ತದೆ. ಅದು ಕೆಟ್ಟು ಹೋದರೆ ಇಡೀ ಶರೀರ ಕೆಟ್ಟು ಹೋಗುತ್ತದೆ. ಅದುವೇ ಹೃದಯ. ಹೃದಯ ಶುದ್ಧೀಕರಣಕ್ಕಾಗಿ ಪ್ರವಾದಿ ಮುಹಮ್ಮದ್(ಸ) ಅವರು ಸಮುದಾಯಕ್ಕೆ ಅನೇಕ ದಿಕ್ರ್, ತಸ್ಬೀಹ್, ದುಆಗಳನ್ನೂ ಕಲಿಸಿಕೊಟ್ಟಿದ್ದಾರೆ.
‘ದಿಕ್ರ್, ತಸ್ಬೀಹ್ ಮತ್ತು ದುಆ’ ಎಂಬ ಈ ಕೃತಿಯಲ್ಲಿ ಮಾನವನ ಆತ್ಮ ಮತ್ತು ಹೃದಯವನ್ನು ಶುದ್ಧೀಕರಿಸುವಂತಹ ಅನೇಕ ಕುರ್ಆನ್ ಸೂಕ್ತಗಳ, ಅನೇಕ ದಿಕ್ರ್-ತಸ್ಬೀಹ್ ದುಆಗಳನ್ನು ಕ್ರೋಡೀಕರಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
