ಮನುಷ್ಯನ ದುರಾಸೆಗೆ ಇತಿಮಿತಿಯಿಲ್ಲ. ಎಷ್ಟು ಸಿಕ್ಕಿದರೂ ಅವನ ಹೊಟ್ಟೆ ತುಂಬುವುದಿಲ್ಲ. ‘ಮನುಷ್ಯನಿಗೆ ಎರಡು ಕಣಿವೆ ತುಂಬಾ ಬಂಗಾರ ಸಿಕ್ಕಿದರೂ ಮೂರನೆಯದಕ್ಕಾಗಿ ಹಾತೊರೆಯುವನು. ಅವನ ಹೊಟ್ಟೆಯನ್ನು ಮಣ್ಣು ಮಾತ್ರ ತುಂಬಬಲ್ಲದು’ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. ಸಂಪತ್ತು ಶೇಖರಿಸುವುದರಲ್ಲಿ ತನ್ನ ಆಯುಷ್ಯವನ್ನೇ ಸವೆಸಿದರೂ ಅವನಿಗೆ ತೃಪ್ತಿಯುಂಟಾಗುವುದಿಲ್ಲ ದುರಾಸೆಯೇ ಮಾನವನ ಎಲ್ಲ ಕೆಡುಕುಗಳಿಗೂ ಮೂಲವಾಗಿದೆ. ದುರಾಸೆಯನ್ನು ಪ್ರವಾದಿಯವರು ತೋಳಕ್ಕೆ ಹೋಲಿಸಿದ್ದಾರೆ. ಹಸಿದ ತೋಳವು ಕುರಿ ಮಂದೆಯ ಮೇಲೆರಗಿದರೆ ಎಂತಹ ವಿನಾಶ ಸೃಷ್ಟಿಸಬಲ್ಲುದು ಎಂದು ಊಹಿಸಲಿಕ್ಕೂ ಸಾಧ್ಯವಿಲ್ಲ. ದುರಾಸೆಯೆಂಬ ತೋಳವು ಮಾನವನಲ್ಲಿ ಅನೇಕ ಕೆಡುಕುಗಳನ್ನು ಹುಟ್ಟು ಹಾಕುತ್ತದೆ. ‘ದುರಾಸೆ ವಿನಾಶಕಾರಿ ಕೆಡುಕು’ ಎಂಬ ಈ ಕೃತಿಯಲ್ಲಿ ಸುಮಾರು 25 ದುರ್ಗುಣಗಳನ್ನು ಎಣಿಸಲಾಗಿದೆ. ಅದರ ದುಷ್ಟರಿಣಾಮಗಳನ್ನು ವಿವರಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
