ಇತಿಹಾಸವು ನಿರ್ದಿಷ್ಟ ಕಾಲದ ಘಟನಾವಳಿ ಮತ್ತು ಸ್ಥಿತಿಗತಿಗಳ ಸ್ಮರಣೆಯಾಗಿದೆ. ಇತಿಹಾಸವನ್ನು ನಿಷ್ಟಕ್ಷಪಾತವಾಗಿ ದಾಖಲಿಸಿದರೆ, ಅದರಿಂದ ಮುಂದಿನ ಪೀಳಿಗೆಗೆ ಹೆಚ್ಚಿನ ಪ್ರಯೋಜನವಾಗುವುದು. ಅದಕ್ಕೆ ವ್ಯತಿರಿಕ್ತವಾಗಿ ಕೋಮುಭಾವನೆಯಿಂದ ದಾಖಲಿಸಿದರೆ ಅದರಿಂದ ಮುಂದಿನ ಪೀಳಿಗೆಯವರಲ್ಲಿ ಹಿಂದಿನವರ ಬಗ್ಗೆ ದ್ವೇಷಭಾವನೆ ಹುಟ್ಟಿಕೊಳ್ಳಬಹುದು. ಇದು ಅತ್ಯಂತ ಅಪಾಯಕಾರಿ ಮನೋಭಾವವಾಗಿದೆ. ಈಗ ಅಂತಹದೇ ಶ್ರಮ ನಡೆಯುತ್ತಾ ಇದೆ. ಆದರಿಂದ ಒಳಿತು ಕೆಡುಕಾಗಿಯೂ- ಕೆಡುಕು ಒಳಿತಾಗಿಯೂ ಒಳ್ಳೆಯವರು ಕೆಟ್ಟವರಾಗಿಯೂ- ಕೆಟ್ಟವರು ಒಳ್ಳೆಯವರಾಗಿಯೂ ಚಿತ್ರೀಕರಿಸಲ್ಪಡುತ್ತಾರೆ. ಅಷ್ಟೇ ಅಲ್ಲ, ದೇಶದ್ರೋಹಿಗಳನ್ನು ದೇಶಪ್ರೇಮಿಗಳಾಗಿಯೂ ದೇಶಪ್ರೇಮಿಗಳನ್ನು ದೇಶದ್ರೋಹಿಗಳಾಗಿಯೂ ಬಿಂಬಿಸಲಾಗುತ್ತದೆ.
ಈ ಪುಸ್ತಕದಲ್ಲಿ ಭಾರತದ ಮುಸ್ಲಿಮ್ ಇತಿಹಾಸದ ನೈಜ ಘಟನಾವಳಿಗಳನ್ನು ಹಾಗೂ ವ್ಯಕ್ತಿಗಳ ನೈಜ ಚಿತ್ರಣವನ್ನೂ ಕನ್ನಡ ಜನತೆಯ ಮುಂದಿಡಲು ಪ್ರಯತ್ನಿಸಲಾಗಿದೆ. ಇದರ ಅಧ್ಯಯನವು ಇತಿಹಾಸ ತಿರುಚುವ ಷಡ್ಯಂತ್ರಗಳನ್ನು ಅನಾವರಣಗೊಳಿಸಲು ಸಹಕಾರಿಯಾಗಬಲ್ಲುದು.
Ratings & Reviews
Login account to write review
Login0.00
Average Rating- (0.00)
